good-morning-status-in-kannada

ಶುಭ ಮುಂಜಾನೆ ಸಂದೇಶಗಳು | Good Morning Wishes in Kannada | Good Morning Status

Good Morning Quotes Status ಶುಭೋದಯ ಸಂದೇಶಗಳು, Status

ಮಾತಿನ ಹಿಂದೆ ಮನಸ್ಸು ಕೆಲಸ ಮಾಡುತ್ತಿರುತ್ತದೆ. ಮನಸ್ಸನ್ನು ಸುಸ್ಥಿತಿಯಲ್ಲಿಟ್ಟುಕೊಂಡರೆ ಮಾತು ಉತ್ತಮವಾಗಿ ಹೊರಡುತ್ತದೆ. ಮೊದಲು ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಲು ಕಲಿಯಬೇಕು.
**ಶುಭೋದಯ**

ನಿಮ್ಮ ಬಗೆಗಿನ ಟೀಕೆಗಳಿಗೆ ತಲೆಕೆಡಿಸಿಕೊಳ್ಳಬಾರದು. ಟೀಕೆಗಳಿಗೆ ಎಷ್ಟೇ ಸಮಜಾಯಿಷಿ ಕೊಟ್ಟರೂ ಅದರಿಂದ ಜನರಿಗೆ ಮನವರಿಕೆಯಾಗುವುದಿಲ್ಲ. ನಿಮ್ಮ ಕೆಲಸ, ಸಾಧನೆಯೇ ಉತ್ತರವಾಗಬೇಕು. ಅದರ ಮುಂದೆ ಚಕಾರ ಎತ್ತಲಾರರು.
**ಶುಭೋದಯ**.

ಜೀವನದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳನ್ನೂ ಒಂದು ಪಾಠವೆಂದು ಸ್ವೀಕರಿಸಿ. ಆಗ ಸಮಸ್ಯೆಗಳನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಪ್ರತಿ ಸಮಸ್ಯೆಯೂ ನಮಗೆ ಜೀವನ ಪಾಠವಾಗುತ್ತದೆ.
**ಶುಭೋದಯ**.

ಪ್ರಯತ್ನ ಎಂಬುದು ಸಣ್ಣ ಪದವಾಗಿರಬಹುದು. ಆದರೆ ಅದು ತರುವ ಪರಿಣಾಮ ಮಾತ್ರ ಅಗಾಧ. ಎಂಥ ಸೋಲನ್ನಾದರೂ ಗೆಲ್ಲುವಂತೆ ಮಾಡುವ ಶಕ್ತಿ ಅದಕ್ಕಿದೆ. ಪ್ರಯತ್ನವೊಂದೇ ನಮ್ಮನ್ನು ಜೀವನ್ಮುಖಿಯಾಗಿಡುವುದು.
**ಶುಭೋದಯ**.

ದಾರಿ ಸುಂದರವಾಗಿದ್ದಾಗ ಅದು ತಲುಪುವ ಗುರಿಯ ಬಗ್ಗೆ ತಿಳಿದು ಕೊಳ್ಳಬೇಕು, ಆದರೆ ಗುರಿ ಸುಂದರವಾಗಿದ್ದಾಗ ದಾರಿಯ ಬಗ್ಗೆ ಯೋಚಿಸದೆ ಮುನ್ನಡೆಯಬೇಕು…
**ಶುಭೋದಯ**

ನಮ್ಮ ಜೀವನಕ್ಕಿಂತ ಬೇರೆಯವರ ಜೀವನ ಚೆನ್ನಾಗಿದೆ ಎಂದು ಯೋಚಿಸುತ್ತೇವೆ ಆದರೆ ನಾವು ಬೇರೆಯವರಿಗೆ * ಬೇರೆ * ಯವರಾಗಿರುತ್ತೇವೆ ಎಂಬುದನ್ನು ಮರೆಯುತ್ತೇವೆ.
**ಶುಭೋದಯ**

ಜೀವನದಲ್ಲಿ ಎರಡನೇ ಭಾರಿ ಅವಕಾಶ ಸಿಗಬಹುದು, ಆದರೆ ಇನ್ನೊಂದು
ನಿದ್ದೆಯಲ್ಲಿ ಕಾಣುವಂತದ್ದು ಕನಸಲ್ಲ, ನಿದ್ದೆ ಗೆಡುವಂತೆ ಮಾಡುವುದಿದೆಯಲ್ಲ ಅದು ನಿಜವಾದ ಕನಸು. – ಡಾ. ಎ.ಪಿ.ಜೆ ಅಬ್ದುಲ್ ಕಲಾಂ.
**ಶುಭೋದಯ**

ಕಷ್ಟನಷ್ಟಗಳಿಗೆ ಕಲ್ಲಾಗು , ಚುಚ್ಚು ಮಾತುಗಳಿಗೆ ಮುಳ್ಳಾಗು , ಏನಾದರೂ ಮುಖದ ಮೇಲಿರಲಿ ನಗು , ನೀ ಧೈರ್ಯದಿ ಮುಂದೆ ಸಾಗು **ಶುಭೋದಯ**

ಹೂಗಳಿಂದ ತು o ಆದ ಕೂಟ ಎಷ್ಟು ಸುಂದರವಾಗಿರುತ್ತೋ , ಒಳ್ಳೆಯ ಆಲೋಚನೆಗಳಿಂದ ತುಂಬದ ಮನಸ್ಸು ಸಹ ಅಷ್ಟೇ ಸುಂದರವಾಗಿರುತ್ತೆ !**ಶುಭೋದಯ**

ಮನುಸ ಉದ್ಯೋಗ , ಆದರ್ಶ ಪಥನರ ಹೊಂದಿಕೆ ಬಾರದೆ ಹೋಕನದಲ್ಲಿ ಸುಖ , ಶಿಲಾರದು
**ಶುಭೋದಯ**

ಜೀವನ ಎರಡು ದಿನ … ಒಂದು ದಿನ ನಿನ್ನ ಪರ … ಇನ್ನೊಂದು ದಿನ ನಿನ್ನ ವಿರುದ್ಧ … ಪರ ಇದ್ದ ದಿನ ಅಹಂಕಾರ ಪಡಬೇಡ … ವಿರುದ್ಧ ಇದ್ದ ದಿನ ತಾಳ್ಮೆ ಕಳೆದುಕೊಳ್ಳಬೇಡ .
**ಶುಭೋದಯ**

ಪ್ರತಿ ರಾತ್ರಿ ನಾವು ನಮ್ಮ ಎಲ್ಲಾ ನ್ಯೂನತೆಗಳ ಬಗ್ಗೆ ಯೋಚಿಸುತ್ತಾ ಮಲಗುತ್ತೇವೆ ಆದರೆ ನಾವು ಆದನ್ನು ಮರೆತು ಮರುದಿನ ಬೆಳಿಗ್ಗೆ ಹೊಸದಾಗಿ ಎಚ್ಚರಗೊಳ್ಳುತ್ತೇವೆ .
**ಶುಭೋದಯ**

Leave a Reply