Life Quotes in Kannada
Life Quotes in Kannada ಜೀವನದ ಬಗ್ಗೆ ಕನ್ನಡ ಸ್ಟೋರಿ
ಈ ಪೋಸ್ಟ್ನಲ್ಲಿ ನಾವು ನಮ್ಮ ಜೀವನದ ಬಗ್ಗೆ ಬರೆದಿರುವ ಸಣ್ಣ ಸಣ್ಣ ಸ್ಟೋರಿಗಳನ್ನು ಇಲ್ಲಿ ಹೇಳಿದ್ದೇವೆ ನಮ್ಮ ಜೀವನದಲ್ಲಿ ನಡೆಯುವ ಕೆಲ ಘಟನೆಗಳ ಬಗ್ಗೆ ಸಣ್ಣ ಸಣ್ಣದಾದ ಸಾಲುಗಳಲ್ಲಿ 15 ರೀತಿಯ ಸಾಲುಗಳನ್ನು ಹೇಳಿದ್ದೇವೆ
ಬದುಕೊಂದು ದೊರಕಿತ್ತು ಇನ್ಯಾರಿಗೊ ಬೆಳಕಾಗಲೆಂದು,ಆದರೆ ಸಮಯ ಸರಿದು ಹೋಗುತ್ತಿದೆ ಕಾಗದದ ತುಂಡು ಗಳಿಸುವುದರಲ್ಲೆ. ಇಷ್ಟು ಹಣ ಪೇರಿಸಿ ಮಾಡುವುದೇನು? ಕೋನೆ ದಿರಿಸಿನಲ್ಲಿ ಜೇಬಿಲ್ಲ ಮಸನದಲ್ಲಿ ತಿಜೋರಿ ಇಲ್ಲ. ಇನ್ನು ಯಮನ ದೂತರೋ ಲಂಚ ಮುಟ್ಟುವುದಿಲ್ಲ
ನೀವು ಹುಟ್ಟುವಾಗ ಏನೂ ಇರಲಿಲ್ಲ,ಆದ್ರೆ ಸಾಯುವಾಗ ನಿಮ್ಮ ಹೆಸರನಿಂದ ಸಾಯುತ್ತಿರಿ ನಿಮ್ಮ ಹೆಸರು ಕೇವಲ ಅಕ್ಷರಗಳಿಂದ ಮಾತ್ರ ಆಗಿದ್ದರೆ ಸಾಲದು ಅದರಲ್ಲಿ ಒಂದು ಇತಿಹಾಸ ಇರಬೇಕು.
ಆಕಳು ತನ್ನ ಹಾಲನ್ನು ತಾನು ಕುಡಿಯುವುದಿಲ್ಲ.ಮರ ತನ್ನ ನೆರಳನ್ನು ತಾನು ಅನುಭವಿಸುವದಿಲ್ಲ.ಜೀವನವೆಂದರೆ ನಮಗಾಗಿ ಬದುಕುವುದಲ್ಲ,ಬೇರೆಯವರಿಗಾಗಿಯೂ ಬದುಕಬೇಕು.ಅದುವೇ ಜೀವನ
ಬೀಜ ಸಂಪೂರ್ಣವಾಗಿ ಯಾವಾಗ ತನ್ನನ್ನೇ ಮಣ್ಣಲ್ಲಿ ಕಳೆದುಕೊಳ್ಳುತ್ತದೋ ಆಗ ಮಾತ್ರ.ಅದು ಕುಡಿಯಿಟ್ಟು ಒಂದು ಮರವಾಗುತ್ತದೆ
ಹೃದಯವೇ,ನಿನ್ನಲ್ಲಿ ಯಾರಾದರೂ ಬಂದು ಆತ್ಮವೂ ಶರೀರದ ಹಾಗೆಯೇ ನಶಿಸುತ್ತದೆ ಎಂದು ಹೇಳಿದರೆ ನಿನ್ನ ಉತ್ತರ ಹೀಗಿರಲಿ;ಹೂವು ನಶ್ವರ,ಆದರೆ ಬೀಜ ಎಂದಿಗೂ ಶಾಶ್ವತ
ಸಾವೆಂದರೆ ಏಕೆ ಭಯ? ಉತ್ತರ:ಸಾಯಲು ಯಾರಿಗೂ ಭಯ ಇರುವುದಿಲ್ಲ.ಆದರೆ ಬಿಟ್ಟು ಹೋಗಬೇಕೆಂದೇ ಪ್ರತಿಯೊಬ್ಬರಿಗೂ ಭಯ ಬರುವುದು.
ಯಾರೋ ನಿಮಗಾಗಿ ಎಷ್ಟು ಹೊತ್ತಾದರೂ ಕಾಯಲು, ಸಿದ್ದರಿದ್ದಾರೆ ಎಂತಾದರೆ, ಅವರಿಗೆ ಮಾಡಲು ಬೇರೆ ಏನೂ ಕೆಲಸವಿಲ್ಲ ಎಂದರ್ಥವಲ್ಲ. ಅವರ ದೃಷ್ಟಿಯಲ್ಲಿ ನಿಮಗಿಂತ, ಮಹತ್ವದ್ದು ಬೇರೇನೂ ಇಲ್ಲ ಎಂದರ್ಥ
ನಿನ್ನೊಡವೆ ಎಂಬುದು ಜ್ಞಾನರತ್ನ ನೋಡಾ.ಅದನ್ನು ನೀನು ಎಡೆಬಿಡದೆ ಅಲಂಕರಿಸಿಯಾದೊಡೆ,ನಮ್ಮ ಗುಹೇಶ್ವರಲಿಂಗದಲ್ಲಿ ನಿನ್ನಂಥ ಸಿರಿವಂತರಿಲ್ಲ ನೋಡಾ ಎಲೇ ಮನವೇ
ನೀವು ಸುಂದರವಾಗಿದರೆ ಅದು ನಿಮ್ಮ ತಂದೆ ತಾಯಿ ಉಡುಗೊರೆ.ನೀವು ನಿಮ್ಮ ಜೀವನವನ್ನು ಸುಂದರಮಾಡಿಕೊಂಡರೆ ಅದು ನೀವು ನಿಮ್ಮ ತಂದೆ ತಾಯಿಗೆ ಕೊಡುವ ಉಡುಗೊರೆ.
ಕಳೆದು ಹೋದದ್ದನ್ನು ಎಷ್ಟು ಸಲ ಚಿಂತಿಸಿದರೂ ಏನೂ ಪ್ರಯೋಜನವಿಲ್ಲ.ಅದು ನಮ್ಮದ್ದಾಗಿದರೆ ತಾನಾಗೇ ನಮ್ಮ ಹತ್ತಿರ ಬರುತ್ತದೆ.ನಮ್ಮದಲ್ಲದಿದ್ದರೆ ಯಾವತ್ತಿದ್ದರೂ ನಮ್ಮಲ್ಲಿ ಉಳಿಯುವುದಿಲ್ಲ.ನಮ್ಮಲ್ಲಿ ಏನೂ ಇರಬೇಕೊ ಅದು ಇದ್ದೇ ಇರುತ್ತದೆ.ಏನು ಇರಬಾರದೊ ಅದು ಬಿಟ್ಟು ಹೋಗುತ್ತದೆ.ಈ ಫಿಲಾಸಪಿ ನಮಗೆ ನಂಬಿಕೆ ಇಲ್ಲದಿದ್ದರೂ ಇದನ್ನು ನಂಬುವುದು ಒಳ್ಳೆಯದು.ಏಕೆಂದರೆ ಇದರಿಂದ ನೆಮ್ಮದಿ ಸಿಗುತ್ತದೆ.
ನಗುವ ಕಂಗಳ ಹಿಂದೆ ಕಣ್ಣೀರು ಕೋಪಿಸುವ ಕಂಗಳ ಹಿಂದೆ ಪ್ರೀತಿ ಗೆಲುವಿನ ಕಂಗಳ ಹಿಂದೆ ಪರಿಶ್ರಮ ಇರುತ್ತೆ ಅನ್ನೋದನ್ನ ಮರೆಯದಿರಿ
ನೀವು ಪ್ರೀತಿಸಿದವರ ಹೃದಯ ಕಲ್ಲು ಅಂತ ಗೊತ್ತಾದ ಮೇಲಿ ಯಾವತ್ತು ಅವರಿಂದ ದೂರ ಆಸ್ಟ್ರೇಡಿ ಯಾಕಂದ್ರೆ ಕಲ್ಲಿನಲ್ಲಿ ಬರೆದ ಹಸರು ಯಾವತ್ತು ಅಆಸಲ್ಲ
ಸಿಗಲ್ಲ ಅಂತ ಗೊತ್ತಿದ್ರು ನಾವು ಅದನ್ನೇ ಇಷ್ಟ ಪಡ್ತೀವಿ ಯಾಕೆ ಗೊತ್ತಾ … ಸಿಗುವ ನೂರು ವಸ್ತುಗಿಂತ ಸಿಗದೇ ಇರೋ ಒಂದು ವಸ್ತು ಮಾತ್ರ ಮನಸ್ಸನ್ನ ಗೆದಿರುತ್ತೆ
ಎಲ್ಲಾ ನಮ್ಮವರು ಎನ್ನುವುದು ಭ್ರಮೆ , ನಾನು ನಂದು ಅನ್ನುವುದು ಸ್ವಾರ್ಥ , ಅವರು ನನ್ನವರು ಎಂಬುದು ಶುದ್ಧ ಸುಳ್ಳು , ನಿನಗಾಗಿ ನೀನು ಎಂಬುದಷ್ಟೇ ಸತ್ಯ .. ಯಾರಿಂದಲೂ ಏನನ್ನೂ ಬಯಸದೆ ಇರುವುದೇ ಸೌಖ್ಯ ..
ಬಟ್ಟೆ ನೋಡಿ ಗೆಳೆತನ ಮಾಡಬೇಡ ಗುಣ ನೋಡಿದೆಳೆತನ ಮಾಡು ಯಾಕೆಂದರೆ … ಬಟ್ಟೆ ಹರಿದು ಹೋಗುವವರೆಗೂ ಮಾತ್ರ ಇರುತ್ತದೆ ಆದರೆ ಗುಣ ಸಾಯುವವರೆಗೂ ಇರುತ್ತದೆ .