love-quotes

Love Status in Kannada ಪ್ರೀತಿಯ ಕ್ವೋಟ್ಸ ಕನ್ನಡದಲ್ಲಿ Love Quotes

Status

ನಿನ್ನ ಮುಗುಳ್ಳಗೆಯ ಕನ್ನಡಿ, ನನ್ನ ಪ್ರೀತಿಗೆ ನೀ ಬರೆದ ಮುನ್ನುಡಿ…

ನಿನ್ನ ಕಿಲಕಿಲ ನಗುವಿನ ಸದ್ದಲ್ಲಿ ನನ್ನೆದೆಯಲ್ಲಿನ ಪ್ರೀತಿಯನ್ನು ದೋಚುವ ಸಂಚಿದೆ…

ಮನದಲಿ ಆಸೆಗಳು ನೂರಾರು, ಆದರೆ ಅವುಗಳಿಗೆ ಆಸರೆ ಯಾರು? ಕಣ್ಣಿನಲಿ ಕನಸುಗಳು ಸಾವಿರಾರು, ಆದರೆ ಅವುಗಳಿಗೆ ಸ್ಪೂರ್ತಿ ತುಂಬಿ ಪ್ರೋತ್ಸಾಹಿಸುವ ಪ್ರೇಮಿ ಯಾರು?

ಕರೆದಾಗ ಬರದಿರುವವಳು, ಕನಸಲ್ಲಿ ಕರೆಯದೇನೆ ಹೇಗೆ ಬಂದಳು? ಕೈಗೆ ಎಟುಕದವಳು, ಕನಸಿಗೆ ಹೇಗೆ ಎಟುಕಿದಳು? ಕಣ್ಣಿಗೆ ಕಾಣಿಸದವಳು, ಮನಸಿಗೆ ಹೇಗೆ ಕಾಣಿಸಿದಳು?

ನನ್ನ ಪ್ರೇಯಸಿ ಅಪರೂಪದ ರೂಪಸಿ ಸತಾಯಿಸುವಳು ನನ್ನ ಸದಾ ಕಾಯಿಸಿ ಕಣ್ಣಲ್ಲೇ ಕೊಲ್ಲುವಳು ಪ್ರೀತಿಸಿ…

ನಿನ್ನ ನಗುವಿನ ರಸದೌತಣ ನನ್ನ ಪ್ರೀತಿಗೆ ನೀ ಕೊಡುವ ವೇತನ… ಅದನ್ನು ಕಡೆತನಕ ಗಳಿಸುವುದೇ ನನ್ನ ಜಾಣತನ…

ನಿಜವಾಗಿಯೂ ನೀನೇ ನನ್ನ ಸಂಪತ್ತು ನೀ ಜೊತೆಗಿದ್ದರೆ ನನಗಿಲ್ಲ ಯಾವುದೇ ಆಪತ್ತು ಪರಸ್ಪರ ಸೋಲುವಿಕೆ ಪ್ರೀತಿಯ ಶರತ್ತು ಎಂದೆಂದಿಗೂ ನೀನು ನನ್ನ ಸೊತ್ತು ಪ್ರಿಯೆ ಇದು ನಿನಗೂ ಗೊತ್ತು…

ನಿನ್ನ ನಗುವಿನ ರಸದೌತಣ ನನ್ನ ಪ್ರೀತಿಗೆ ನೀ ಕೊಡುವ ವೇತನ… ಅದನ್ನು ಕಡೆತನಕ ಗಳಿಸುವುದೇ ನನ್ನ ಜಾಣತನ…

ನನ್ನ ಪ್ರೇಯಸಿ ಅಪರೂಪದ ರೂಪಸಿ ಸತಾಯಿಸುವಳು ನನ್ನ ಸದಾ ಕಾಯಿಸಿ ಕಣ್ಣಲ್ಲೇ ಕೊಲ್ಲುವಳು ಪ್ರೀತಿಸಿ…

ನನ್ನ ಹೃದಯದ ಹೂದೋಟದಲ್ಲಿ ಅರಳಿ ನಿಂತ ಪ್ರೀತಿ ಹೂವನ್ನು ಅರಸುತ್ತ ಬಂದ ದುಂಬಿ ನೀನು…

ನಗುತ್ತಲೇ ಅಳುವೆನು ಅಳುತ್ತಲೇ ನಗುವೆನು ಏನಾದರೂ ನಿನ್ನ ಮಾತ್ರ ನಾನೆಂದು ಅಗಲೆನು… ನಿಜವಾಗಿಯೂ ಪ್ರೀತಿಗೆ ಕಣ್ಣಿಲ್ಲ ನನ್ನ ಪ್ರೀತಿಗೆ ನೀನೇ ಎಲ್ಲ…

ಕಂಗಳು ಎರಡಾಗಿದ್ದರೂ ಕಾಣೋ ಕನಸು ಒಂದೇ, ದೇಹಗಳು ಎರಡಾಗಿದ್ದರೂ ಉಸಿರಾಡೋ ಗಾಳಿ ಒಂದೇ, ಮನಸ್ಸುಗಳು ಎರಡಾಗಿದ್ದರೂ ಮಾಡೋ ಪ್ರೀತಿ ಒಂದೇ…

ಆಕೆ ನನ್ನ ಕೈಹಿಡಿದಾಗ ಮರೆಯಾಯ್ತು ನನ್ನ ಬಾಳಲ್ಲಿದ್ದ ಏಕಾಂಗಿಯೆಂಬ ದೊಡ್ಡ ಸೊನ್ನೆ……

ಹೂ ಅರಳಲು ಸೂರ್ಯನ ಬಿಸಿಲು ಬೇಕು. ನನ್ನ ಮನ ಅರಳಲು ನಿನ್ನ ನಗುವೊಂದೆ ಸಾಕು….

ಬೇವು ಕಹಿಯಾದರೂ ಅದರ ನೆರಳು ತಂಪಾಗಿರೋ ರೀತಿ ನಾನಿನ್ನ ನೋಡ್ಕೊತೀನಿ. ನನ್ನನ್ನು ನೀನು ನಿರ್ಭಯವಾಗಿ ನಂಬಬಹುದು…

ನಿನ್ನ ಮುಗುಳ್ಳಗೆಯ ಕನ್ನಡಿ, ನನ್ನ ಪ್ರೀತಿಗೆ ನೀ ಬರೆದ ಮುನ್ನುಡಿ…

ನಿನ್ನ ಕಿಲಕಿಲ ನಗುವಿನ ಸದ್ದಲ್ಲಿ ನನ್ನೆದೆಯಲ್ಲಿನ ಪ್ರೀತಿಯನ್ನು ದೋಚುವ ಸಂಚಿದೆ…

ನೀವು ಪ್ರೀತಿಸಿದವರ ಹೃದಯ ಕಲ್ಲು ಅಂತ
ಗೊತ್ತಾದಮೇಲೆ ಯಾವತ್ತು ಅವರಿಂದ
ದೂರಾಗಬೇಡಿ ಎಕೆಂದರೆ ಕಲ್ಲಿನಲ್ಲಿ ಬರೆದ
ಹೆಸರು ಯಾವತ್ತೂ ಅಳಿಸಲ್ಲ..

ಮೋಡದ ಜೊತೆಗೆ ಮಳೆ ಫ್ರಿ, ಆರತಿ ಜೊತೆಗೆ ಪ್ರಸಾದ ಫ್ರಿ, ಗುಲಾಬಿ ಗಿಡದ ಜೊತೆಗೆ ಹೂವು ಫ್ರಿ, ಈ ಮೆಸೇಜ್‌ ಜೊತೆಗೆ ನನ್ನ ನೆನಪುಗಳು ಫ್ರೀ..

ಕಷ್ಟ ಅಂತ ಬಂದರೆ ಕರುಣೆ ತೋರಿ, ಇಷ್ಟ ಅಂತ
ಬಂದ್ರೆ ಪ್ರೀತಿ ನೀಡು, ನಿನ್‌ ನಂಬಿ ಬಂದವರಿಗೆ
ಉಸಿರು ಇರುವ ತನಕ ಪ್ರೀತಿ, ಸ್ನೇಹ ನೀಡು..

ದೂರದಿರು ನನ್ನನ್ನು ಓ ಗೆಳಯ
ನಿನಗಾಗಿಯೇ ಮೀಸಲಾಗಿದೆ ಈ ಹೃದಯ
ಕನಸ್ಸಲ್ಲು ಅನುಮಾನಿಸದಿರು ನನ್ನ ಪ್ರೀತಿಯ
ಜೀವಸವೆದರು ನೀನೇ ನನ್ನ ಇನಿಯ…

ಪೂರೈಸುವೆ ಎಂದಿಗೂ ನಾನು,
ಮನವ ಅರಿತು ನಿನ್ನ ಇಷ್ಟ..
ಸಹಿಸುವೆ ನಿನ್ನ ಸಲುವಾಗಿ,
ಬದುಕಿನ ಹಲವು ಕಷ್ಟ…
ನಮ್ಮಿಬ್ಬರ ಪ್ರೀತಿಯ ನಂಟಲ್ಲಿ ಎಂದೂ ಇಲ್ಲ ನಷ್ಟ…

ಅಮ್ಮನ ಪ್ರೀತಿ,…. ಹುಡುಗಿ ಪ್ರೀತಿ,…. ಎರಡೂ ಒಂದಲ್ಲ ಅಂತ ಹೇಳ್ತಾರೆ ಆದರೆ
ನಿಜವಾಗಿ, ಮನಸಾರೆ, ಪ್ರೀತಿಸೋ ಹುಡುಗಿ ಪ್ರೀತಿ ಅಮ್ಮನ ಪ್ರೀತಿಗೆ ಸಮವಾಗಿರುತ್ತೇ.

ದೇಹ ಬಯಸಿದ ಸುಖವಲ್ಲ ಪ್ರೀತಿ ಅಂದ್ರೆ,.. ಮನಸ್ಸು ತಪಸ್ಸು ಮಾಡಿ ಪಡೆದಿರುವ ದೊಡ್ಡ ವರ ಪ್ರೀತಿ ಅಂದ್ರೆ
ಮನಸಲ್ಲಿ ಜನ್ಮತಾಳಿದ ಈ ಪ್ರೀತಿ ದೇಹ ಮಣ್ಣಲ್ಲಿ ಸೇರೋವರೆಗೂ ಹಾಗೆ ಇರುತ್ತೆ….

ನಂಬಿಕೆಗೆ ಮತ್ತೊಂದು ಹೆಸರೇ ನಿನ್ನದು… ನಿನ್ನ ಹೃದಯ ಎಂದಿಗೂ ನನ್ನದು. ನಿನ್ನ ಎಷ್ಟು ಪ್ರೀತಿಸಿದರೂ ಸಾಲದು. ನೀ ಜೊತೆಯಾಗಿದ್ದರೆ ಇಡೀ ಜಗತ್ತೇ ಕಾಣದು…

ನಾನು ನೀನಾಗಿ, ನೀನು ನಾನಾದರೆ ಎಷ್ಟು ಚೆನ್ನ, ನಾನು ನಿನ್ನಂತೆ ನೀನು ನನ್ನಂತಾದರೆ ಎಷ್ಟು ಚೆನ್ನ…

ಪ್ರೀತಿಯಲ್ಲಿ ಎಷ್ಟೇ ಜಗಳ ಬಂದರು ಮಾತು ಇಂದ ದೂರ ಇರಬಹುದು ಆದ್ರೆ ಮನಸ್ಸಿಂದ ಯಾವತ್ತೂ ದೂರ ಹಗೋಕೆ ಸಾಧ್ಯ ಇಲ್ಲ…

ನಾನು ದಿನ ಮುಂಜಾನೆ ದೇವರನ್ನು ನೋಡುವ ಮೊದಲು ನಿನ್ನನ್ನು ನೋಡುವಾ ಆಸೆ, ನಾನು ಬೇರೆಯವರು ಗುಡ್ ಮಾರ್ನಿಂಗ್ ಹೇಳುವ ಮೊದಲು ನಿನಗೆ ಗುಡ್ ಮಾರ್ನಿಂಗ್ ಹೇಳುವ ಆಸೆ….

ನನ್ನವಳ ಸವಿವಾಣಿಯಲ್ಲಿ ಮೋಹಿನಿಯ ನೆರಳಿದೆ. ಅವಳ ಕಂಗಳಲ್ಲಿ ಕಾಮಿನಿಯ ಕಲೆಯಿದೆ. ನನ್ನವಳು ಇಂಗ್ಲೀಷನಲ್ಲಿ ಎಷ್ಟೇ ಮಾತನಾಡಿದರೂ, ಅವಳು ರಾತ್ರಿ ಕನಸು ಕಾಣುವುದು ಕನ್ನಡದಲ್ಲೇ…

ಪ್ರತಿಕ್ಷಣ ನಿನ್ನ ದಾರಿಯನ್ನೇ ಕಾಯುವೆ ಜೀವವಿರುವರಿಗೂ ನಿನ್ನನ್ನೇ ಪ್ರೀತಿಸುವೆ…

ಜಗತ್ತು ದೊಡ್ಡದು ಆದರೆ ನನ್ನ ಪುಟ್ಟ ಲೋಕ ನೀನೇ ಅಲ್ಲವೇ

ಪುಸ್ತಕದ ಪುಟಗಳ ನಡುವೆ ಬಚ್ಚಿಟ್ಟ ಹಾಳೆಯ ಒಲವೇ ಓದಿನಲ್ಲಿ ನಿನ್ನನ್ನೇ ಮರೆತಿರುವೇ ಮೂಡಿರಲು ನಗುವೆಂಬ ಒಡವೇ ಅದುವೇ ಪ್ರೇಮ ಸಂದೇಶವೇ ಅಲ್ಲವೇ …

ಬಯಸಿದೆ ನಾ ನಿನ್ನನು ಬದಲಾಯಿಸಿದೆ ನೀ ನನ್ನನು, ನೀ ಹೇಳದೆ ಮಾತೊಂದನು, ನಾ ನಾದೆ ನಿನ್ನವನು..

ಯಾರೇ ನೀನು ಓಲವೇ,
ನನ್ನ ಮನಸು ಕದ್ದ ಚೆಲುವೆ,
ನೋಡುತ ನಿನ್ನ ಮುದ್ದಾದ ನಗುವೇ,
ಮರೆತೇ ಹೋದೆ ನಾ ಈ ಜಗವೇ…

ನೋಡಿದೆ ನಿನ್ನ ಕಣ್ಣ ನೋಟ, ಮನಸ್ಸಿಗೆ ಅಂದಷ್ಟೇ ಖುಷಿಯಾಯ್ತು ಬಾಡೂಟ…

ಬಿಟ್ಟು ಸಾಯುವುದು ತುಂಬಾ ಸುಲಭ… ಆದರೆ ಬಿಟ್ಟುಕೊಟ್ಟು ಬದುಕೋದಿದೆಯಲ್ಲಾ ನರಕಕ್ಕಿಂತ ನರಕ…

ಪ್ರೀತಿಯ ಭಾವನೆಯನ್ನು ವ್ಯಕ್ತಪಡಿಸದಿದ್ದರೆ, ನಮ್ಮನ್ನು ನಾವೇ ಕೊಂದುಕೊಂಡಂತೆ

ನೀವು ಪ್ರೀತಿಸುವವರನ್ನು ನೋಡಿಕೊಳ್ಳುವುದು ಪ್ರಾರಂಭದಲ್ಲಿ ಕಷ್ಟವಾಗಬಹುದು, ಆದರೆ ಸಮಯದೊಂದಿಗೆ ಅದು ಸುಲಭವಾಗುತ್ತದೆ….

ಜನರನ್ನು ತಮ್ಮ ತಪ್ಪಿಗಾಗಿ ಕ್ಷಮಿಸುವುದೇ ನಿಜವಾದ ಪ್ರೀತಿ…

ಪ್ರೀತಿಯ ಭಾವನೆಯನ್ನು ವ್ಯಕ್ತಪಡಿಸದಿದ್ದರೆ, ನಮ್ಮನ್ನು ನಾವೇ ಕೊಂದುಕೊಂಡಂತೆ….

ಜನರು ಪ್ರೀತಿಯಲ್ಲಿ ನಕಲಿ ಭರವಸೆಗಳನ್ನು ನೀಡುವುದೇ ಕೆಟ್ಟದಾದ ಭಾವನೆ….

ಪ್ರೀತಿಯಲ್ಲಿ ಸಿಲುಕಿದಾಗ ಒಬ್ಬರು ತಮ್ಮ ಸ್ನೇಹಿತರನ್ನು ಎಂದಿಗೂ ಮರೆಯಬಾರದು…

ನಗುವಿನಲಿ ಸಂದೇಶ ಕಳಿಸಿದೆ ಸುಮ್ಮೆ
ಸನ್ಮತಿ ಸೂಚಿಸಿತು ಅವಳ ಕಣ್ಸನ್ನೆ…

ನಿನ್ನ ನಗುವಲ್ಲಿ ಹೂ ಅರಳಿ ನಗುತ್ತಿದೆ.
ನೋಡ್ತಾ ನಿಂತರೆ ನಂದೇ ದೃಷ್ಟಿ ಆಗೋ ಹಂಗಿದೆ….

ನಿನ್ನ ಕಿಲಕಿಲ ನಗುವಿನ ಸದ್ದಲ್ಲಿ ನನ್ನೆದೆಯಲ್ಲಿನ ಪ್ರೀತಿಯನ್ನು ದೋಚುವ ಸಂಚಿದೆ….

ಅಡಕಸಬಿ ಕವಿ ನಾನು ಕಳೆದು ಹೋದ ಪದಗಳ ಜೋಡಿಸಿ
ನಿನ್ನ ಬಣ್ಣಿಸಲು ಕವಿತೆಯೊಂದ ಬರೆದೆ
ಮುಗಿಯದ ಕಾದಂಬರಿ ನೀನು ಕವಿತೆಯಲೇಕೆ ಕುಳಿತೆ

ಕದ್ದು ಮುಚ್ಚಿ ಪ್ರೀತಿ ಕೊಡುವೆ ಗೆಳತಿ ನೀ . . .
ನನಗೆ ತಿಳಿಯದೆ ಸಂಗ್ರಹಿಸಲು ಸಾಲದಾಗಿದೆ
ಹೃದಯವೆ ಒಲವಾಗಿ ಸೇರಿಬಿಡು ನೀನನ್ನೆದೆ

ಇರುಳುಗಳ ನಡುವಲ್ಲಿ ಕನಸುಗಳ ತೆರೆಯಲ್ಲಿ
ನಿನ್ನ ಬಿಂಬಗಳು ಪ್ರಿಯೆ ಮತ್ತೆ ಮತ್ತೆ ನಡೆದಿವೆ,
ತತ್ತರಿಸಿ ಹೋಗಿರುವ ಪ್ರೇಮ ಬಳ್ಳಿಯ ಚೆಲುವೆ ಮತ್ತೆ ನಡುವೆಯೇ ನಿನ್ನ ಪ್ರೇಮಧಾರೆಯ ಹರಿಸಿ….

ಬದುಕಿಕೋ ಎಂದು ಸಂತೆಯೊಳಗೆ ನೀ
ಬೆರಳು ಸೋಕಿಸಿ ಹೋದಾಗಿನಿಂದ
ಮತಿಭ್ರಮಣೆಯಾಗಿದೆ ಹುಡುಗೀ..
ಬದುಕುವುದೇನಿದ್ದರೂ ನಿನ್ನೊಂದಿಗೆ
ಸಹಿಸಿಕೋ ಈ ಅರೆಹುಚ್ಚನನ್ನು.

ಸುಖವಿರಲಿ ದುಖ:ವಿರಲಿ,
ಕನಸಿರಲಿ ನನಸಿರಲಿ…
ಜೀವನದ ಪ್ರತಿಯೊಂದು ಕ್ಷಣದಲ್ಲೂ ಮನದಲ್ಲಿನ ಪ್ರತಿಯೊಂದು ಕಣದಲ್ಲೂ… ಕಾಯುತ್ತಿರುವೆ ನಿನ್ನ ಆ ಒಂದು ಮೊಗವನ್ನ…

Leave a Reply